25th June 2025
ಬಳ್ಳಾರಿ, ಜೂ.25: ಗಡಿಗಿ ಚನ್ನಪ್ಪ ವೃತ್ತದ ಕಾಮಗಾರಿಯನ್ನು ಅತ್ಯಂತ ಉತ್ತಮ ಗುಣಮಟ್ಟದಿಂದ ನಿರ್ಮಾಣ ಮಾಡಲಾಗುತ್ತಿರುವುದರಿಂದ ವಿಳಂಬ ಆಗುತ್ತಿದೆ ವಿನಹ ಬೇರೆ ಯಾವ ಕಾರಣಗಳಿಲ್ಲ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬುಧವಾರ ಬೆಳಿಗ್ಗೆ ಸಲಾಂ ಬಳ್ಳಾರಿ ಅಭಿಯಾನದಂಗವಾಗಿ ನಗರದ 16ನೇ ವಾರ್ಡಿನ ಶ್ರೀರಾಂಪುರ ಕಾಲೋನಿಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.
ಗಡಿಗಿ ಚನ್ನಪ್ಪ ವೃತ್ತ ನಗರದ ಹೃದಯ ಭಾಗದಲ್ಲಿದೆ, ಜನರಿಗೆ ಒಂದೆರಡು ತಿಂಗಳು ಸಂಚಾರಕ್ಕೆ ತೊಂದರೆ ಆಗುತ್ತಿರುವುದು ನಿಜ, ಹಾಗಂತ ಅವಸರದಿಂದ ಕಾಮಗಾರಿಯನ್ನು ಮಾಡಿ, ತದನಂತರ ಅದೇ ಸಮಸ್ಯೆಯಾಗಿ ರೂಪ ತಾಳಬಾರದು ಎಂಬ ಉದ್ಧೇಶ ನಮ್ಮದು ಎಂದು ತಿಳಿಸಿದರು.
ಎರಡು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ, ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದ ಅವರು, ಸಿಎಂ-ಡಿಸಿಎಂ ಅವರನ್ನು ಕರೆಸಿ ಕಾಮಗಾರಿಯನ್ನು ಉದ್ಘಾಟಿಸಲಾಗುವುದು ಎಂದರು.
*ಹಿರಿಯ ಶಾಸಕರ ಆಕ್ಷೇಪಕ್ಕೆ ಕಾರಣ ಗೊತ್ತಿಲ್ಲ:* ಶಾಸಕ ಬಿ.ಆರ್.ಪಾಟೀಲ್, ರಾಜು ಕಾಗೆ ಅವರು ಅನುದಾನ ಸಂಬಂಧಿಸಿ ನೀಡಿರುವ ಹೇಳಿಕೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾರಾ ಭರತ್ ರೆಡ್ಡಿ; ಅನುದಾನ ಬಿಡುಗಡೆಗೆ ಸಂಬಂಧಿಸಿ ಹಿರಿಯ ಶಾಸಕರು ವ್ಯಕ್ತಪಡಿಸಿರುವ ಹೇಳಿಕೆಗಳಿಗೆ ಕಾರಣ ಏನೆಂದು ನನಗೆ ಗೊತ್ತಿಲ್ಲ, ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಷ್ಟು ನಾನು ದೊಡ್ಡವನಲ್ಲ, ಆದರೆ ಬಳ್ಳಾರಿ ನಗರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದೆ, ಕುಡಿಯುವ ನೀರು ಯೋಜನೆ, ರಸ್ತೆ, ಮಸೀದಿ, ಮಂದಿರ, ಒಳ ಚರಂಡಿ ಹೀಗೆ ಹತ್ತು ಹಲವು ಕಾಮಗಾರಿಗಳಿಗಾಗಿ ಸಿಎಂ-ಡಿಸಿಎಂ-ಜಿಲ್ಲಾ ಉಸ್ತುವಾರಿ ಸಚಿವರು ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.
ಸಲಾಂ ಬಳ್ಳಾರಿ ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ, ಸಮಸ್ಯೆ ಆಧರಿಸಿ ಯೋಜನೆಗಳನ್ನು ರೂಪಿಸುತ್ತಿದ್ದೇವೆ, ನೂರಕ್ಕೆ ನೂರರಷ್ಟಾಗದಿದ್ದರೂ ಗರಿಷ್ಠ ಪ್ರಮಾಣದಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಈ ಸಂದರ್ಭ ಮಾಜಿ ಮೇಯರ್, ಪಾಲಿಕೆಯ ಸದಸ್ಯೆ ಎಂ.ರಾಜೇಶ್ವರಿ, ಜಬ್ಬಾರ್, ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಮಂಜುಳಾ, ಹೊನ್ನಪ್ಪ, ಹಗರಿ ಗೋವಿಂದ, ಚಂಪಾ ಚವ್ಹಾಣ್, ಯಶೋಧಾ, ಸ್ಥಳೀಯ ಮುಖಂಡರಾದ ಬಾಲರಾಜ್, ನಾಗರಾಜ, ಅಭಿರಾಮ್, ರಾಮಚರಣ್, ರಾಕಿ, ದೇವಣ್ಣ, ಯಲ್ಲಪ್ಪ, ವಿನೋದ್, ಅರವಿಂದ ಮೊದಲಾದವರು ಹಾಜರಿದ್ದರು.
ಶಾಸಕ ನಾರಾ ಭರತ್ ರೆಡ್ಡಿ ವಾರ್ಡಿನಾದ್ಯಂತ ಸಂಚರಿಸಿ ಜನರ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸಿದರು. ಮಹಾನಗರ ಪಾಲಿಕೆಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ₹50 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಹುಟ್ಟುಹಬ್ಬ ಆಚರಣೆ-ಬೋಯಪಾಟಿ ವಿಷ್ಣುವರ್ಧನ್
ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶ ಯಾವ ಪುರುಷಾರ್ಥಕ್ಕೆ?? 3400 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ, ಪರಿಹಾರ ಕೊಡಿ ಮೊದಲು. ಕೃಷಿ ಸಚಿವ ರಾಜೀನಾಮೆ ಕೊಡಲಿ-ಶ್ರೀರಾಮುಲು